ವಿದ್ಯಾರ್ಥಿನಿಲಯಗಳು

JSS_rsw_18

ಬಾಲಕರ ವಿದ್ಯಾರ್ಥಿನಿಲಯ

2001-02ರ ಶೈಕ್ಷಣಿಕ ವರ್ಷದಲ್ಲಿ ಸುತ್ತೂರಿನಲ್ಲಿ ಬಾಲಕರ ವಿದ್ಯಾರ್ಥಿನಿಲಯ ಸ್ಥಾಪನೆಗೊಂಡಿತು. 2002ರ ಡಿಸೆಂಬರ್ತಿಂ ಗಳಿನಲ್ಲಿ ಘನತೆವೆತ್ತ ಭಾರತದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಇದನ್ನು ಉದ್ಘಾಟಿಸಿದರು. ಸುಸಜ್ಜಿತಅಡುಗೆಮನೆ, ವಿಶಾಲವಾದ ಊಟದ ಸಭಾಂಗಣಗಳು, ಪ್ರಾರ್ಥನಾಮಂದಿರ, ಗಾಳಿ ಬೆಳಕಿನಿಂದ ಕೂಡಿದ ಮಲಗುವಪಡಸಾಲೆಗಳಿಂದ ಇದು ಸುಸಜ್ಜಿತವಾಗಿದೆ. ನಿವಾಸಿಗಳಿಗೆ ಶುಚಿ-ರುಚಿಗಳಿಂದ ಕೂಡಿದ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ.ದಕ್ಷ ವಾರ್ಡನ್ ಹಾಗೂ ತರಬೇತಿ ಪಡೆದ ಉಸ್ತುವಾರಿ ನೌಕರವರ್ಗದ ಸಹಾಯದಿಂದ ಮಕ್ಕಳ ಯೋಗಕ್ಷೇಮವನ್ನು ಚೆನ್ನಾಗಿ ಗಮನಿಸಲಾಗುತ್ತಿದೆ. ಹಾಸ್ಟೆಲ್‍ನಲ್ಲಿ ಸುಮಾರು 2,380 ಮಕ್ಕಳಿಗೆ ಸ್ಥಳಾವಕಾಶವಿದೆ.

JSS_rsw_18

ಬಾಲಕಿಯರ ವಿದ್ಯಾರ್ಥಿನಿಲಯ

ಸುತ್ತೂರಿನಲ್ಲಿ ನಿರ್ಮಿಸಲಾಗಿರುವ ವಿಶಾಲವಾದ ವಿದ್ಯಾರ್ಥಿನಿಲಯವು 1,620 ಮಂದಿ ಬಾಲಕಿಯರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಬಾಲಕಿಯರಿಗೆ ಗುಣಮಟ್ಟದ ವಸತಿಯನ್ನು ನೀಡಲಾಗುತ್ತದೆ. ಹಾಸ್ಟೆಲ್ ಎರಡು ಅಂತಸ್ತಿನ ಕಟ್ಟಡವಾಗಿದ್ದು 12,600 ಚ. ಮೀಟರ್‍ಗಳ ವಿಸ್ತೀರ್ಣ ಹೊಂದಿದೆ. 8 ಕೋಟಿ ರೂ.ಗಳನ್ನು ಇದರ ನಿರ್ಮಾಣಕ್ಕಾಗಿ ವೆಚ್ಚ ಮಾಡಲಾಗಿದೆ. ಹಾಸ್ಟೆಲ್‍ನಲ್ಲಿ 54 ಮಲಗುವ ಪಡಸಾಲೆಗಳಿವೆ. ಪ್ರಾರ್ಥನಾಮಂದಿರ ಮತ್ತು ಸುಂದರವಾದ ಕಾರಿಡಾರ್‍ಗಳಿವೆ. ಅಡುಗೆ ಕೋಣೆಯು ಆಧುನಿಕ ಸಲಕರಣೆಗಳಿಂದ ಸಜ್ಜಾಗಿದ್ದು ನಿವಾಸಿಗಳಿಗೆ ಆರೋಗ್ಯಕರ ಆಹಾರವನ್ನು ನೀಡಲಾಗುತ್ತಿದೆ. ದಕ್ಷರಾದ ವಾರ್ಡನ್ ಅವರು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಸಮರ್ಥ ಸಹಾಯ- ಕರು ಇವರಿಗೆ ನೆರವು ನೀಡುತ್ತಾರೆ. ಘನತೆವೆತ್ತ ಭಾರತದ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ದಿನಾಂಕ 9-5-2009 ರಂದು ಇದನ್ನು ಉದ್ಘಾಟಿಸಿದರು.