ಕಾರ್ಯಕ್ರಮಗಳು

ಆರೋಗ್ಯ ರಕ್ಷಣೆ

ಸುತ್ತೂರು ಶ್ರೀಕ್ಷೇತ್ರದಲ್ಲಿ ಆರೋಗ್ಯ ರಕ್ಷಣೆಗೆ ಮಹತ್ವ ನೀಡಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದ ಸಹಯೋಗದಿಂದ ಗ್ರಾಮದ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ನೀಡಲಾಗಿದೆ. ಈ ಸಹಯೋಗದಡಿಯಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧೋಪಚಾರ ನೀಡಲಾಗುತ್ತದೆ. ಗ್ರಾಮಸ್ಥರಿಗೆ ಉಚಿತ ದಂತ ಚಿಕಿತ್ಸೆ ನೀಡಲು ಕೊಲ್ಗೇಟ್ ಕಂಪನಿಯ ಸಹಯೋಗದೊಂದಿಗೆ ದಂತ ಚಿಕಿತ್ಸಾಲಯವನ್ನು ಸ್ಥಾಪಿಸಲಾಗಿದೆ.

ನೈರ್ಮಲ್ಯ

ಸಂಪೂರ್ಣ ಸ್ವಚ್ಛತಾ ಆಂದೋಲನದ ಅಂಗವಾಗಿ ವೈಯಕ್ತಿಕ ಮನೆಗಳಿಗೆ 400 ಶೌಚಾಲಯಗಳನ್ನು ಮತ್ತು ಎರಡು ಸಮುದಾಯ ಶೌಚಾಲಯಗಳನ್ನು ಮೈಸೂರಿನ ಜಿಲ್ಲಾ ಪಂಚಾಯಿತಿಯ ನೆರವಿನಿಂದ ನಿರ್ಮಿಸಲಾಗಿದೆ.

ಸುವರ್ಣ ಗ್ರಾಮೋದಯ ಯೋಜನೆ

ಸುತ್ತೂರಿನ ಗ್ರಾಮಪಂಚಾಯಿತಿಯು ಸುವರ್ಣ ಗ್ರಾಮೋದಯ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದರಿಂದಾಗಿ ಡಾಂಬರೀಕರಣಗೊಂಡಿರುವ ರಸ್ತೆಗಳು, ಮಳೆನೀರು ಚರಂಡಿ, ಶೌಚಾಲಯಗಳು, ಕುಡಿಯುವ ನೀರಿನ ಸೌರ್ಕರ್ಯಗಳು ಇತ್ಯಾದಿ ಮೂಲಭೂತ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಕುಡಿಯುವ ನೀರು

ರಾಜೀವ್‍ಗಾಂಧಿ ಕುಡಿಯುವ ನೀರಿನ ಸರಬರಾಜು ಯೋಜನೆಯಡಿ ಸುತ್ತೂರು ಗ್ರಾಮಕ್ಕೆ ನೀರನ್ನು ಒದಗಿಸಲಾಗುತ್ತಿದೆ. ಗ್ರಾಮಸ್ಥರಿಗೆ 70 ಎಲ್.ಪಿ.ಸಿ.ಡಿ. ನೀರನ್ನು ಪೂರೈಸಲಾಗುತ್ತಿದೆ. 221 ಲಕ್ಷ ರೂ. ಗಳ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಗೆ ಯೋಜನೆಯನ್ನು ರೂಪಿಸಲಾಗಿದೆ.