JSS_rsw_24

ಸಮುದಾಯ ಭವನ

ಜನತೆಯ ಸೇವೆಯಲ್ಲಿ

ಸುತ್ತೂರು ಮತ್ತು ಆಸುಪಾಸಿನ ಗ್ರಾಮಸ್ಥರ ಉಪಯೋಗಕ್ಕಾಗಿ ಶ್ರೀ ಸಿದ್ಧನಂಜ ದೇಶಿಕೇಂದ್ರ ಮಂಗಳ ಮಂಟಪವನ್ನು ನಿರ್ಮಿಸಲಾಗಿದೆ. ಸಮಾರಂಭಗಳನ್ನು ನಡೆಸಲು ಈ ಸಭಾಂಗಣ ತುಂಬ ಪ್ರಶಸ್ತವಾಗಿದೆ.

ಅತಿಥಿಗೃಹಗಳು

ಉಳಿದುಕೊಳ್ಳಲು ಉತ್ತಮ ತಾಣ

ಯಾತ್ರಿಗಳ ಸೌಕರ್ಯಕ್ಕಾಗಿ ಅವರಿಗೆ ವಸತಿ ಒದಗಿಸುವ ಸಲುವಾಗಿ ಮಠವು ‘ಶ್ರೀ ರಾಜೇಂದ್ರ ಕೃಪ’ ಅತಿಥಿಗೃಹವನ್ನು ನಿರ್ಮಿಸಿದೆ. ಅಲ್ಲದೇ ‘ನಿಜಲಿಂಗ ಶಿವಾಚಾರ್ಯ ಕುಟೀರ’ವನ್ನು ಸಹ ನಿರ್ಮಿಸಲಾಗಿದೆ. ಇದು ಸುತ್ತೂರಿಗೆ ಭೇಟಿ ಕೊಡುವ ಮಠಾಧೀಶರ ಸಲುವಾಗಿ ಮೀಸಲಾಗಿದೆ. ಈ ಅತಿಥಿಗೃಹಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಅತಿಥಿಗಳು ಉಳಿದುಕೊಳ್ಳಬಹುದಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಅತಿ ಗಣ್ಯವ್ಯಕ್ತಿಗಳಿಗಾಗಿ ಸುತ್ತೂರಿನಲ್ಲಿ ಪ್ರತ್ಯೇಕ ಅತಿಥಿಗೃಹವೊಂದನ್ನು ನಿರ್ಮಿಸುತ್ತಿದೆ.

JSS_rsw_24

ದಾಸೋಹ ಭವನ

ಭಕ್ತರಿಗೆ ಪ್ರೀತಿಯ ಉಪಚಾರ

ಭಕ್ತರು ಸುತ್ತೂರಿಗೆ ಭೇಟಿಕೊಟ್ಟಾಗ ಅವರಿಗೆ ಪ್ರಸಾದ ನೀಡುವ ಸಲುವಾಗಿ ಭವ್ಯವಾದ ದಾಸೋಹ ಭವನವನ್ನು ನಿರ್ಮಿಸಲಾಗಿದೆ. ಭಾರತದ ಗೌರವಾನ್ವಿತ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈ ಭವನದ ಉದ್ಘಾಟನೆ ನೆರವೇರಿಸಿದರು. ಈ ಭವನ ಶುಭ್ರವೂ, ವಿಶಾಲವೂ ಆಗಿದೆ. ಆಧುನಿಕ ಉಪಕರಣಗಳಿಂದ ಕೂಡಿದ ಸುಸಜ್ಜಿತ ಅಡುಗೆ ಮನೆಯನ್ನು ಹೊಂದಿದೆ. ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದ ಸಮಯದಲ್ಲಿ ನಿತ್ಯವೂ ಸುಮಾರು 50,000 ಮಂದಿಗೆ ಉಚಿತವಾಗಿ ಪ್ರಸಾದವನ್ನು ನೀಡಲಾಗುತ್ತದೆ.