ಸಾಮೂಹಿಕ ವಿವಾಹ

ನೆಮ್ಮದಿಯ ದಾಂಪತ್ಯ ಜೀವನದತ್ತ

ಸುತ್ತೂರು ಶ್ರೀಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷವೂ ಸಾಮೂಹಿಕ ವಿವಾಹವನ್ನು ನೆರವೇರಿಸಲಾಗುತ್ತದೆ. ಸುಮಾರು 250 ದಂಪತಿಗಳು ವಿವಾಹ ಮಾಡಿಕೊಳ್ಳುತ್ತಾರೆ. ಇದಲ್ಲದೆ ಪ್ರತಿ ತಿಂಗಳೂ ಸಾಮೂಹಿಕ ವಿವಾಹವನ್ನು ಕೈಗೊಳ್ಳಲಾಗುತ್ತದೆ. ಸರಾಸರಿ ನಾಲ್ಕರಿಂದ ಐವರು ದಂಪತಿಗಳು ಇದರ ಉಪಯೋಗ ಪಡೆಯುತ್ತಾರೆ. ಉಚಿತವಾಗಿ ಸೀರೆ, ಕುಪ್ಪಸ, ಪಂಚೆ, ಶಲ್ಯ ಮತ್ತು ಮಾಂಗಲ್ಯ ನೀಡುವುದರ ಜೊತೆಗೆ ದಂಪತಿಗಳ ಬಂಧುಗಳಿಗೆ ಉಚಿತವಾಗಿ ಪ್ರಸಾದವನ್ನು ನೀಡಲಾಗುತ್ತದೆ. ಈ ಉಚಿತ ವಿವಾಹ ಸೌಲಭ್ಯ ಎಲ್ಲ ಜನಾಂಗಗಳಿಗೂ ಲಭ್ಯವಿದೆ.