JSS_rsw_21

ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ

ರೈತರ ಜೀವನ ಸುಧಾರಿಸಲು ತಂತ್ರಜ್ಞಾನದ ವರ್ಗಾವಣೆ

ಜೆಎಸ್‍ಎಸ್ ಮುಖ್ಯ ಉದ್ದೇಶ. ಇದರ ಜೊತೆಗೆ, ರಾಷ್ಟ್ರೀಯ ತೋಟಗಾರಿಕಾ ಮಂಡಳಿ, ಜೀವವಿಜ್ಞಾನ ಇಲಾಖೆ, CAPART, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳಂಥ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ನೀಡುವ ಆರ್ಥಿಕ ಸಹಕಾರಗಳಿಂದ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. 1994 ರಲ್ಲಿ ಆರಂಭಗೊಂಡಂದಿನಿಂದ ಇದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಮಹತ್ವಪೂರ್ಣ ಬದಲಾವಣೆಯನು ತಂದಿದೆ. 10,000 ಕ್ಕೂ ಹೆಚ್ಚು ಮಂದಿ ರೈತರಿಗೆ, 8,000 ಮಂದಿ ಕೃಷಿ ಮಹಿಳೆಯರಿಗೆ, 800 ಮಂದಿ ವಿಸ್ತರಣಾ ಸಿಬ್ಬಂದಿಗೆ, 2,000 ಮಂದಿ ಗ್ರಾಮೀಣ ಯುವಕರಿಗೆ ನೂತನ

ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಸಾಧನೆ

  • ಸ್ಥಳೀಯವಾಗಿ ಉತ್ತಮ ಮಟ್ಟದ ಬೀಜಗಳು ಸಕಾಲಕ್ಕೆ, ಸೂಕ್ತ ಬೆಲೆಗೆ ಸಿಗುವಂತೆ ಮಾಡಲು ಸುತ್ತೂರಿನಲ್ಲಿ ‘ಬೀಜ ಗ್ರಾಮ’ ಯೋಜನೆಯನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ರೈತರನ್ನು ಸಂಘಟಿಸಿ, ಸ್ವಸಹಾಯ ಸಂಘಗಳನ್ನು ರಚಿಸಿ ವಿವಿಧ ಬೆಳೆಗಳ ಬೀಜಗಳನ್ನು ಉತ್ಪಾದಿಸಲಾಗುತ್ತದೆ. ಈ ವಿನೂತನ ಕಾರ್ಯಕ್ರಮದ ಪ್ರಯೋಜನಗಳನ್ನು ವಿಸ್ತರಿಸಲು, ಜೆಎಸ್‍ಎಸ್ ಮಹಾವಿದ್ಯಾಪೀಠವು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ, ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ನೆರವಿನ ಎಸ್.ಜಿ.ಎಸ್.ವೈ. ವಿಶೇಷ ಯೋಜನೆಯಡಿ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯದ 24 ಜಿಲ್ಲೆಗಳ 500 ಹಳ್ಳಿಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಒಟ್ಟಾರೆ 15 ಕೋಟಿ ರೂ.ಗಳನ್ನು ಯೋಜನೆಗೆ ಒದಗಿಸಲಾಗಿದೆ.
  • ಕೀಟಗಳ ನಿರ್ವಹಣೆಗಾಗಿ ಬೃಹತ್ ಪ್ರಮಾಣದಲ್ಲಿ ಟ್ರೈಕೋಗ್ರಾಮ ಕಿಲೋನಿಸ್ ಅನ್ನು ಉತ್ಪಾದಿಸಲು ಸಾಧ್ಯವಾಗುವಂತೆ ಸುತ್ತೂರಿನಲ್ಲಿ ಟ್ರೈಕೋಗ್ರಾಮ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.
  • ಸ್ವಸಹಾಯ ಸಂಘಗಳ ಮೂಲಕ ಸ್ಥಳೀಯವಾಗಿ ಉತ್ಪಾದಿಸಿದ ಬೀಜಗಳ ಸಂಸ್ಕರಣೆಗಾಗಿ ‘ಬೀಜ ಸಂಸ್ಕರಣಾ ಘಟಕ’ವನ್ನು ಸ್ಥಾಪಿಸಿದೆ. ಗುಣಮಟ್ಟದ ರೇಷ್ಮೆ ಹುಳುಗಳನ್ನು ರೇಷ್ಮೆ ಬೇಸಾಯಗಾರರಿಗೆ ಸರಬರಾಜು ಮಾಡಲು ‘ಚಾಕಿ ಸಾಕಾಣಿಕೆ ಕೇಂದ್ರ’ವನ್ನು ಎಸ್.ಜಿ.ಎಸ್.ವೈ. ವಿಶೇಷ ಯೋಜನೆಯಡಿ ಸ್ಥಾಪಿಸಿದೆ.