JSS_rsw_17

ಶಿಕ್ಷಣದ ಮೂಲಕ ಗ್ರಾಮೀಣ ಬಡಮಕ್ಕಳಿಗೆ ಶಕ್ತಿ

ಗ್ರಾಮೀಣ ಕುಟುಂಬಗಳಿಂದ ಬಂದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಸುತ್ತೂರು ಶ್ರೀಕ್ಷೇತ್ರದ ಜೆಎಸ್‍ಎಸ್ ಶಾಲೆ ಜೆಎಸ್‍ಎಸ್ ಮಹಾವಿದ್ಯಾಪೀಠದ ವಿಶಿಷ್ಟ ಯೋಜನೆಯಾಗಿದ್ದು ಸೌಕರ್ಯವಿಲ್ಲದವರಿಗೆ ಸೌಕರ್ಯ ಒದಗಿಸಿಕೊಟ್ಟಿದೆ. ಅರವತ್ತು ಎಕರೆ ವಿಶಾಲವಾದ ಭೂಮಿಯಲ್ಲಿ ಇದು ಸ್ಥಾಪಿತಗೊಂಡಿದ್ದು ಶಾಲೆಯ ಕಟ್ಟಡದ ವಿಸ್ತೀರ್ಣ 13,900 ಚದರ ಮೀಟರ್‍ಗಳಷ್ಟಿದ್ದು 7 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಇಲ್ಲಿರುವ ಶಾಲಾ ಮಕ್ಕಳು ದೇಶದ ನಾನಾ ಭಾಗಗಳಿಂದ ಬಂದವರಾಗಿದ್ದು ಎಲ್ಲ ಧರ್ಮ, ಮತ, ಪಂಗಡ ಮತ್ತು ಪಂಥಗಳಿಗೆ ಸೇರಿದವರಾಗಿದ್ದಾರೆ. ಬಹು ಮಂದಿ ವಿದ್ಯಾರ್ಥಿಗಳು ಬಡತನದಿಂದ ನಲುಗಿರುವ ಪ್ರದೇಶಗಳಿಂದ, ಅದರಲ್ಲೂ ವಿಶೇಷವಾಗಿ ಬರಗಾಲಪೀಡಿತ ಮತ್ತು ಹಿಂದುಳಿದ ಜಿಲ್ಲೆಗಳಿಂದ ಬಂದವರಾಗಿದ್ದಾರೆ.

ಬಡತನ, ಶಾಲೆ ಬಹು ದೂರದಲ್ಲಿರುವುದು, ಬರಗಾಲ, ತಂದೆ ಅಥವಾ ತಾಯಿ ಒಬ್ಬರೇ ಇರುವಂತಹ ಮಗು ಅಥವಾ ತಂದೆ ತಾಯಿಯರಿಲ್ಲದ ಮಗು, ಇಂತಹವರನ್ನೇ ಆಯ್ಕೆ ಮಾಡಲಾಗುತ್ತದೆ. ಗ್ರಾಮೀಣ ಕುಟಂಬದಿಂದ ಬಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಶಾಲೆಯ ಗುರಿ. ಇದರಿಂದಾಗಿ ಅವರ ಮತ್ತು ಅವರ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಿ – ಕೊಳ್ಳಬಹುದಾಗಿದೆ.

ಪ್ರಸ್ತುತ ಶಾಲೆಯಲ್ಲಿ 3,700 ವಿದ್ಯಾರ್ಥಿಗಳಿದ್ದು ಆ ಪೈಕಿ 3,000 ನಿವಾಸಿ ವಿದ್ಯಾರ್ಥಿಗಳು ಮತ್ತು ಉಳಿದವರು ಶಾಲೆಗೆ ಬಂದು ಹೋಗುವ ಅನಿವಾಸಿ ವಿದ್ಯಾರ್ಥಿಗಳು. ರಾಜ್ಯ ಪಠ್ಯ ಕ್ರಮದ ಮೇರೆಗೆ ನರ್ಸರಿ ಶಿಕ್ಷಣದಿಂದ ಹಿಡಿದು 10 ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ನಿμÁ್ಠವಂತ ಮತ್ತು ಸಮರ್ಥ ಬೋಧಕರ ತಂಡವಿದ್ದು ಉತ್ತಮ ಗ್ರಂಥಭಂಡಾರ, ಕಂಪ್ಯೂಟರ್ ಲ್ಯಾಬೋರೇಟರಿ ಮುಂತಾದ ಎಲ್ಲ ಬಗೆಯ ಸೌಲಭ್ಯಗಳಿವೆ.

ಇಂಟರ್‍ನೆಟ್ ಸೌಲಭ್ಯ, ಭಾμÁ ಪ್ರಯೋಗಾಲಯದ ಮೂಲಕ ಇಂಗ್ಲಿμï ಭಾμÉಯನ್ನು ಸುಲಭವಾಗಿ ಕಲಿಸುವ ಅವಕಾಶಗಳಿವೆ. ಬೃಹತ್ತಾದ ಆಟದ ಮೈದಾನ ಮತ್ತು ದೈಹಿಕ ಅಂಗಸಾಧನೆ ಕಲಿಕೆಯ ಸಾಧನಗಳಿವೆ. ಗಾಳಿಬೆಳಕಿನಿಂದ ಕೂಡಿದ 70 ವಿಶಾಲ ತರಗತಿ ಕೋಣೆಗಳಿವೆ. ಬಯಲು ರಂಗಮಂದಿರವಿದೆ.

ರೇಖಾಚಿತ್ರ, ವರ್ಣಚಿತ್ರ, ಮಡಿಕೆಕುಡಿಕೆಗಳ ನಿರ್ಮಾಣ, ತೊಗಲು ಬೊಂಬೆಯಾಟ, ಸಂಗೀತ, ಜನಪದ ಸಂಗೀತ ಮತ್ತು ನರ್ತನ, ಬೀದಿನಾಟಕ, ವಿಜ್ಞಾನ ಪ್ರದರ್ಶನಗಳು ಇತ್ಯಾದಿ ವಿಷಯಗಳಿಗೆ ಶಾಲೆ ಪೆÇ್ರೀತ್ಸಾಹ ನೀಡುತ್ತದೆ. ಹೊಲಿಗೆ, ಗೃಹ ನಿರ್ವಹಣೆ, ತೋಟಗಾರಿಕೆ, ಅಡುಗೆ ಮತ್ತು ಕೃಷಿಗಳಂತಹ ಕೌಶಲಗಳಲ್ಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.