JSS_rsw_20

ಜಾತ್ರಾ ಮಹೋತ್ಸವ

ಪ್ರತಿ ವರ್ಷ ಜನವರಿ ಎರಡನೆಯ ವಾರದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳವರ ವಾರ್ಷಿಕ ಜಾತ್ರಾ ಮಹೋತ್ಸವವನ್ನು ನಡೆಸಲಾಗುವುದು. ರಾಜ್ಯದ ನಾನಾ ಭಾಗಗಳಿಂದ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಜನ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸುತ್ತಮುತ್ತಲಿನ ಗ್ರಾಮಗಳ ಜನರು ಇದರಲ್ಲಿ ಭಾಗವಹಿಸುತ್ತಾರೆ. 50 ಸಾವಿರಕ್ಕೂ ಹೆಚ್ಚು ಮಂದಿಗೆ ದಾಸೋಹ ಭವನದಲ್ಲಿ ಐದು ದಿನಗಳ ಕಾಲ ಉಚಿತ ಪ್ರಸಾದವನ್ನು ನೀಡಲಾಗುತ್ತದೆ.

ಪೂಜೆಗಳು, ಕ್ರೀಡೆ, ದನದ ಜಾತ್ರೆ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಕಲೆ, ಸಾಂಸ್ಕೃತಿಕ, ವಿಜ್ಞಾನ ವಸ್ತುಪ್ರದರ್ಶನಗಳು ಮತ್ತು ಕೃಷಿ ಪ್ರಾತ್ಯಕ್ಷಿಕೆಗಳು ಈ ಸಂದರ್ಭದಲ್ಲಿ ನಡೆಯುತ್ತವೆ. ಕಲಾವಿದರು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಮನರಂಜನೆಯ ಜೊತೆಗೆ ತಿಳುವಳಿಕೆಯನ್ನು ನೀಡುತ್ತಾರೆ. ಜಾತ್ರೆಯ ಅವಧಿಯಲ್ಲಿ ಮಕ್ಕಳಿಗೆ ವರ್ಣಚಿತ್ರ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಗಳಿರುತ್ತವೆ.

ಗದ್ದಿಗೆಯು ತರುಣರಿಗೆ ಮತ್ತು ವೃದ್ಧರಿಗೂ ಕೂಡಿಯೇ ಆಧ್ಯಾತ್ಮಿಕ ದಿವ್ಯ ಸ್ಫೂರ್ತಿ ಕೇಂದ್ರವಾಗಿರುತ್ತದೆ. ಶ್ರದ್ಧೆ, ಭಕ್ತಿ, ಏಕತೆ ಮತ್ತು ಸ್ವರ್ಗೀಯ ಆನಂದಗಳ ಸಂಗಮವೇ ಜಾತ್ರೆಯೆನಿಸುತ್ತದೆ.