ಸುತ್ತೂರು ಶ್ರೀಮಠದ ಗುರು ಪರಂಪರೆ

ತನ್ನ ಸುಪ್ರಸಿದ್ಧ ಮಠಾಧೀಶರಲ್ಲಿ ಪ್ರತಿಯೊಬ್ಬ ಮಠಾಧೀಶರ ಕೊಡುಗೆಯಿಂದ ಶತಮಾನಗಳುದ್ದಕ್ಕೂ ಸುತ್ತೂರು ಮಠ ಬೆಳೆದು ಬಂದಿದೆ. ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬ ಮಠಾಧೀಶರೂ ತಮ್ಮದೇ ಮಾರ್ಗವನ್ನು ಅನುಸರಿಸಿದ್ದಾರೆ. ಇವರೆಲ್ಲರ ಸಾಹಸಗಳು, ಪ್ರಯತ್ನಗಳು ಮತ್ತು ಕಾರ್ಯಗಳಿಂದ ಇಂದು ಶ್ರೀ ಸುತ್ತೂರು ಮಠಕ್ಕೆ ಅದ್ಭುತ ವರ್ಚಸ್ಸು ಲಭಿಸಿವೆ.

 • ಜಗದ್ಗುರು ಶ್ರೀ ಈಶಾನೇಶ್ವರ ಒಡೆಯರ್ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಈಶಾನೇಶ್ವರ ಒಡೆಯರ್ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ನಿಜಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಸಿದ್ಧನಂಜ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಕಪಿನಿ ನಂಜುಂಡ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಚನ್ನವೀರ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಸಿದ್ಧಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಪರ್ವತೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಭಂಡಾರಿ ಬಸಪ್ಪ ಒಡೆಯರ್ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಕೂಗಲೂರು ನಂಜುಂಡ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಘನಲಿಂಗದೇವ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಇಮ್ಮಡಿ ಶಿವರಾತ್ರೀಶ್ವರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಗುರುನಂಜ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಗುರುಚನ್ನಬಸವಾಚಾರ್ಯ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಗುರುಪಂಚಾಕ್ಷರ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಚಿದ್ಘನ ಶಿವಾಚಾರ್ಯ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಚನ್ನವೀರ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಮಹಾತ್ಮ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಸಿದ್ಧಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಮಂತ್ರಮಹರ್ಷಿ ಪಟ್ಟದ ಶಿವರಾತ್ರೀಶ್ವರ ಮಹಾಸ್ವಾಮಿಗಳು
 • ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
 • ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು

ಪ್ರತಿ ವರ್ಷ ಜನವರಿ ಎರಡನೆಯ ವಾರದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳವರ ವಾರ್ಷಿಕ ಜಾತ್ರಾ ಮಹೋತ್ಸವವನ್ನು ನಡೆಸಲಾಗುವುದು. ರಾಜ್ಯದ ನಾನಾ ಭಾಗಗಳಿಂದ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಜನ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸುತ್ತಮುತ್ತಲಿನ ಗ್ರಾಮಗಳ ಜನರು ಇದರಲ್ಲಿ ಭಾಗವಹಿಸುತ್ತಾರೆ. 50 ಸಾವಿರಕ್ಕೂ ಹೆಚ್ಚು ಮಂದಿಗೆ ದಾಸೋಹ ಭವನದಲ್ಲಿ ಐದು ದಿನಗಳ ಕಾಲ ಉಚಿತ ಪ್ರಸಾದವನ್ನು ನೀಡಲಾಗುತ್ತದೆ.

ಪೂಜೆಗಳು, ಕ್ರೀಡೆ, ದನದ ಜಾತ್ರೆ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಕಲೆ, ಸಾಂಸ್ಕೃತಿಕ, ವಿಜ್ಞಾನ ವಸ್ತುಪ್ರದರ್ಶನಗಳು ಮತ್ತು ಕೃಷಿ ಪ್ರಾತ್ಯಕ್ಷಿಕೆಗಳು ಈ ಸಂದರ್ಭದಲ್ಲಿ ನಡೆಯುತ್ತವೆ. ಕಲಾವಿದರು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಮನರಂಜನೆಯ ಜೊತೆಗೆ ತಿಳುವಳಿಕೆಯನ್ನು ನೀಡುತ್ತಾರೆ. ಜಾತ್ರೆಯ ಅವಧಿಯಲ್ಲಿ ಮಕ್ಕಳಿಗೆ ವರ್ಣಚಿತ್ರ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಗಳಿರುತ್ತವೆ. ಗದ್ದಿಗೆಯು ತರುಣರಿಗೆ ಮತ್ತು ವೃದ್ಧರಿಗೂ ಕೂಡಿಯೇ ಆಧ್ಯಾತ್ಮಿಕ ದಿವ್ಯ ಸ್ಫೂರ್ತಿ ಕೇಂದ್ರವಾಗಿರುತ್ತದೆ. ಶ್ರದ್ಧೆ, ಭಕ್ತಿ, ಏಕತೆ ಮತ್ತು ಸ್ವರ್ಗೀಯ ಆನಂದಗಳ ಸಂಗಮವೇ ಜಾತ್ರೆಯೆನಿಸುತ್ತದೆ.