ಸುತ್ತೂರಿನ ದೇವಾಲಯಗಳು

JSS_rsw_3

ಶ್ರೀ ಸೋಮೇಶ್ವರ ದೇವಾಲಯ

ದೇವಾಲಯವು ಗ್ರಾಮದ ಒಳಭಾಗದಲ್ಲಿದ್ದು, ಸೋಮೇಶ್ವರ ಮತ್ತು ಶಂಕರನಾರಾಯಣ ದೇವರುಗಳ ಆವಾಸಸ್ಥಾನವಾಗಿದೆ. ಒಂದೇ ಕಲ್ಲಿನಲ್ಲಿ ಶಂಕರ ಮತ್ತು ನಾರಾಯಣರನ್ನು ಕೆತ್ತಲಾಗಿದೆ.

JSS_rsw_4

ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನ

ಸುತ್ತೂರು ಶ್ರೀಕ್ಷೇತ್ರದಲ್ಲಿ ಇದು ಪ್ರಾಚೀನವಾದ ಮತ್ತು ಐತಿಹಾಸಿಕವಾದ ದೇವಾಲಯವಾಗಿದೆ. ನಾಲ್ಕು ಅಡಿ ಎತ್ತರದ ನಾರಾಯಣಸ್ವಾಮಿ ವಿಗ್ರಹವನ್ನು ಹೊಯ್ಸಳ ಮನೆತನದ ಮೊದಲನೆ ನರಸಿಂಹನ ದಂಡನಾಯಕ ಶ್ರೀ ಲಕ್ಷ್ಮಯ್ಯನು ಕ್ರಿ. ಶ. 1169 ರಲ್ಲಿ ಸ್ಥಾಪಿಸಿದ್ದಾನೆ. ಮುರಿದು ಬೀಳುವ ಸ್ಥಿತಿಯಲ್ಲಿದ್ದ ದೇವಾಲಯವನ್ನು ಶ್ರೀಮಠವು ಇತ್ತೀಚೆಗೆ ಜೀರ್ಣೋದ್ಧಾರ ಮಾಡಿದೆ.

ಅಮೃತೇಶ್ವರಿ, ಚಂಡಿಕೇಶ್ವರಿ ಮತ್ತು ನಾರಾಯಣಸ್ವಾಮಿ ದೇವಾಲಯದ ಇತರ ದೇವರುಗಳು.

JSS_rsw_5

ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನ

ನಂಜನಗೂಡು-ತಿ. ನರಸೀಪುರದ ರಸ್ತೆಯ ಗುಡ್ಡದ ಭಾಗದಲ್ಲಿ ಗ್ರಾಮದಿಂದ ಒಂದು ಕಿಲೋಮಿಟರ್ ದೂರದಲ್ಲಿ ಈ ದೇವಾಲಯವಿದೆ. ವೀರಭದ್ರೇಶ್ವರ ವಿಗ್ರಹ ಆರು ಅಡಿ ಎತ್ತರವಾಗಿದೆ. ಸುತ್ತಮುತ್ತಲಿನ ಹಳ್ಳಿಯ ಜನರು ಈ ದೇವಸ್ಥಾನದ ಭಕ್ತರು. ಜಾತ್ರಾ ಮಹೋತ್ಸವದ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.