ಸುತ್ತೂರಿನಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು

ಶ್ರೀ ಸುತ್ತೂರು ಮಠವು ಸಮಾಜದ ಕಲ್ಯಾಣಕ್ಕಾಗಿ ಹಲವಾರು ರೀತಿಗಳಲ್ಲಿ ಕಾರ್ಯಶೀಲವಾಗಿದೆ. ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಪ್ರತ್ಯೇಕ ಸಂಸ್ಥೆಯಾಗಿದ್ದು ವ್ಯಕ್ತಿಗಳ, ಕಲೆ ಮತ್ತು ಸಂಗೀತಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಥಾಪಿತವಾಗಿದೆ. ಇತರ ತನ್ನ ಕಾರ್ಯಕ್ರಮಗಳ ಜೊತೆಗೆ ಆಧ್ಯಾತ್ಮಿಕತೆ, ಧ್ಯಾನ ಮತ್ತು ಪ್ರಾಣಯಾಮ ಕಾರ್ಯಕ್ರಮಗಳನ್ನು ಭಾಗಿಗಳಿಗೆ ನೀಡುವುದಲ್ಲದೆ ಜಟಿಲವಾದ ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಮಾರ್ಗದರ್ಶನ ನೀಡುತ್ತದೆ.

ಗುರುಕುಲ

2000 ದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಆರಂಭವಾದ ಗುರುಕುಲವು ಯೋಗ್ಯ ವಿದ್ಯಾರ್ಥಿಗಳಿಗೆ ಸನಿವಾಸ ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತದೆ. ಶಿಷ್ಯರಿಗಾಗಿ ಮತ್ತು ‘ಸಾಧಕರಿಗಾಗಿ’ ಗುರುಕುಲದಲ್ಲಿ ಆಗಮಗಳು (ಶಾಸ್ತ್ರಗಳು) ಮತ್ತು ವೇದಗಳ ಮೇಲೆ ಉಪನ್ಯಾಸಗಳು ನಡೆಯುತ್ತವೆ. ಬೆಳಗಿನ ಜಾವದಲ್ಲಿ ವೇದ ಮತ್ತು ಆಗಮಗಳನ್ನು ಕಲಿಯುವುದರ ಜೊತೆಗೆ ಪಾಠಗಳು ತರಗತಿಯಲ್ಲೂ ನಡೆಯುತ್ತವೆ. ಸುತ್ತೂರಿನಲ್ಲಿ ಆಗಾಗ ನಡೆಯುವ ಧಾರ್ಮಿಕ ಶಿಬಿರಗಳಲ್ಲೂ ಈ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

JSS_rsw_27

ಶಾಸಕರಿಗೆ ಸಹಚಿಂತನ ಶಿಬಿರ

2008 ಸೆಪ್ಟೆಂಬರ್‍ನಲ್ಲಿ ಸುತ್ತೂರು ಶ್ರೀಕ್ಷೇತ್ರವು ವಿಶಿಷ್ಟವಾದ ಕಾರ್ಯಕ್ರಮವೊಂದನ್ನು ಎರಡನೆಯ ಬಾರಿಗೆ ಯಶಸ್ವಿಯಾಗಿ ನಡೆಸಿತು. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರಿಗಾಗಿ ಮೂರು ದಿನಗಳ ಶಿಬಿರವೊಂದನ್ನು ಏರ್ಪಡಿಸಿತ್ತು. ಇದೊಂದು ಅಪರೂಪವಾದ ರಾಜಕೀಯ-ಆಧ್ಯಾತ್ಮಿಕ ಚಿಂತನಾ ಕಾರ್ಯಕ್ರಮವಾಗಿದ್ದು ಶಾಸಕರುಗಳಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಸಾಮಾಜಿಕ ಹೊಣೆಗಾರಿಕೆಗಳನ್ನು ತುಂಬುವುದಾಗಿತ್ತು. ಪಕ್ಷೇತರ ಬೇಧ ಭಾವಗಳನ್ನು ಮರೆತು 65ಕ್ಕೂ ಹೆಚ್ಚಿನ ಮಂದಿ ಶಾಸಕರು ಇದರಲ್ಲಿ ಭಾಗವಹಿಸಿದ್ದರು. ವಿವಿಧ ಹಿನ್ನೆಲೆಯಿಂದ ಬಂದ ಪ್ರಜ್ಞಾವಂತ ಆಧ್ಯಾತ್ಮಿಕ ಮುಖಂಡರು ಮತ್ತು ವಿದ್ವಾಂಸರು

ತರಗತಿಗಳನ್ನು ನಿರ್ವಹಿಸಿದರು. ‘ಏಕಾಂತಧ್ಯಾನ’ದ ಜೊತೆಗೆ ‘ರಾಷ್ಟ್ರ ನಿರ್ಮಾಣ’ದಿಂದ ಹಿಡಿದು ‘ಗ್ರಾಮೀಣ ಅಭಿವೃದ್ಧಿಯಲ್ಲಿ ಧಾರ್ಮಿಕ ಪಾತ್ರ’ ವನ್ನು ಕುರಿತಂತೆ ಅನೇಕ ವಿಷಯಗಳ ಬಗ್ಗೆಪರಿಣತರು ಉಪನ್ಯಾಸ ಮಾಡಿದರು. ಯೋಗ ಮತ್ತು ಧ್ಯಾನದ ತರಗತಿಗಳೂ ನಡೆದವು.