ವಸ್ತುಸಂಗ್ರಹಾಲಯ

ಗ್ರಾಮೀಣ ಪರಂಪರೆಯ ಪ್ರದರ್ಶನ ರಂಗ

ಕ್ರಿ.ಶ. 2000ದಲ್ಲಿ ಸ್ಥಾಪಿಸಲಾದ ಸುತ್ತೂರು ವಸ್ತುಸಂಗ್ರಹಾಲಯವು ಗ್ರಾಮೀಣ ಪರಂಪರೆಯನ್ನು ಪ್ರದರ್ಶಿಸುವತ್ತ ಒತ್ತು ನೀಡಿದೆ. 14,000 ಚ. ಅಡಿ ಪ್ರದೇಶದಲ್ಲಿ ಎರಡು ಅಂತಸ್ತುಗಳಲ್ಲಿ ಇದು ನೆಲೆಗೊಂಡಿದೆ. ಪ್ರಾಗೈತಿಹಾಸಿಕ ವಸ್ತುಗಳು, ಶಿಲ್ಪಗಳು, ಶಿಲಾನಾಣ್ಯಗಳು, ವರ್ಣಚಿತ್ರಗಳು, ಗೃಹಬಳಕೆ ವಸ್ತುಗಳು, ಗ್ರಾಮೀಣ ಉದ್ಯಮಗಳಿಗೆ ಸಂಬಂಧಿಸಿದ ವಸ್ತುಗಳು, ರಕ್ಷಣಾತ್ಮಕ ವ್ಯವಸ್ಥೆಗಳು ಮತ್ತು ಜನಪದ ಕಲೆಗಳು ಮತ್ತು ಜನಪದ ಸಂಗೀತ ವಾದ್ಯಗಳನ್ನು ಒಳಗೊಂಡಂತೆ ಬಗೆಬಗೆಯ ವಸ್ತುಗಳು ಇಲ್ಲಿವೆ. 4,000 ಪುಸ್ತಕ ಗ್ರಂಥಭಂಡಾರ ಈ ವಸ್ತು ಸಂಗ್ರಹಾಲಯದಲ್ಲಿದೆ. ಜೊತೆಗೆ 200 ತಾಳೆಗರಿ ಹಸ್ತಪ್ರತಿಗಳು ಮತ್ತು ಪ್ರಾಚೀನ ವಿಷಯಗಳಿಗೆ ಸಂಬಂಧಿಸಿದ 12,000 ಹಾಳೆಗಳು ಈ ವಸ್ತುಸಂಗ್ರಹಾಲಯದಲ್ಲಿವೆ.