ಸಾಹಿತ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳು

/ಸಾಹಿತ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳು
ಸಾಹಿತ್ಯ ಮತ್ತು ಸಾಂಸ್ಕೃತಿಕ ಕೇಂದ್ರಗಳು2016-12-22T14:55:46+00:00

ಶಿವರಾತ್ರೀಶ್ವರ ಕೇಂದ್ರ, ಬೆಂಗಳೂರು

ಬೆಂಗಳೂರಿನ ಜಯನಗರದ ಜೆಎಸ್‍ಎಸ್ ವಿದ್ಯಾಸಂಸ್ಥೆಗಳ ಸಮುಚ್ಚಯದಲ್ಲಿ ಅತ್ಯಾಧುನಿಕ ಒಳಾಂಗಣ ಸೌಲಭ್ಯವುಳ್ಳ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದು ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಾಂಸ್ಕೃತಿಕ ಕೇಂದ್ರವಾಗಿದ್ದು, ಯುವಜನತೆಯಲ್ಲಿ ಸುಪ್ತವಾಗಿರುವ ಕಲಾಪ್ರತಿಭೆಯನ್ನು ಹೊರಹೊಮ್ಮಿಸಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಈ ಕೇಂದ್ರದಲ್ಲಿ ಪ್ರಖ್ಯಾತ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸಾಲಿನಲ್ಲಿ 243 ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಸಾಲಿನ ವಾರ್ಷಿಕ ಆವರ್ತ ವೆಚ್ಚ `55.05 ಲಕ್ಷಗಳಾಗಿರುತ್ತದೆ.

ಶ್ರೀ ಶಿವರಾತ್ರೀಶ್ವರ ಕಲಾಮಂಟಪ

ಪರಮ ಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಈ ಕಲಾಮಂಟಪವು 1948ರಲ್ಲಿ ಸ್ಥಾಪನೆಯಾಯಿತು. ಶಿವಶರಣರ ಜೀವನಾಧಾರಿತ ನಾಟಕಗಳನ್ನು ರಚಿಸಿ ಅವುಗಳನ್ನು ಪ್ರದರ್ಶಿಸುವುದರ ಮೂಲಕ ಶಿವಶರಣರ ಜೀವನ ಸಂದೇಶಗಳನ್ನು ಜನತೆಗೆ ಮುಟ್ಟಿಸುವ ಹಾಗೂ ಅವರನ್ನು ಸನ್ಮಾರ್ಗಕ್ಕೆ ತರುವ ಉದ್ದೇಶದಿಂದ ಈ ಕಲಾಮಂಟಪವನ್ನು ಸ್ಥಾಪಿಸಲಾಯಿತು. ಕಲಾಮಂಟಪದ ಮೂಲಕ ಅನೇಕ ನಾಟಕಕಾರರು ಪ್ರಸಿದ್ಧಿಗೆ ಬರಲು ಅವಕಾಶವಾಯಿತು. ಕಲಾಮಂಟಪದಲ್ಲಿ ಅನೇಕ ನಾಟಕಗಳನ್ನು ಪ್ರದರ್ಶಿಸಿದ್ದು ಅವುಗಳಲ್ಲಿ ಬಹಳ ಪ್ರಸಿದ್ಧಿಗೆ ಬಂದ ನಾಟಕಗಳೆಂದರೆ ಆದರ್ಶ ವಿವಾಹ, ಶ್ರೀ ಪಾದಕ್ಕೆ ನಮೋ ನಮಃ, ಶ್ರೀ ಶಿವರಾತ್ರೀಶ್ವರ ವಿಜಯ, ಜಗಜ್ಯೋತಿ ಬಸವೇಶ್ವರ ಮತ್ತು ಶ್ರೀ ನಿಜಗುಣ ಶಿವಯೋಗಿ. ಸ್ವರ್ಣ ಮಹೋತ್ಸವವನ್ನು ಆಚರಿಸಿರುವ ಕಲಾಮಂಟಪದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸುವ ಸಂಪ್ರದಾಯವೂ ಇದೆ.
ಈ ಸಾಲಿನಲ್ಲಿ ಕಿಂದರಜೋಗಿ, ಮೃಚ್ಛಕಟಿಕ, ಚಿತ್ರಪಟ ಮತ್ತು ಶ್ರೀ ಶಿವರಾತ್ರೀಶ್ವರ ವಿಜಯ ನಾಟಕಗಳನ್ನು ವಿವಿಧ ಕಡೆಗಳಲ್ಲಿ ಪ್ರದರ್ಶಿಸಲಾಗಿದೆ.

ಜೆಎಸ್‍ಎಸ್ ರಂಗೋತ್ಸವ: ಕಲಾಮಂಟಪದ ವತಿಯಿಂದ ಜೆಎಸ್‍ಎಸ್ ರಂಗೋತ್ಸವ ಕಾರ್ಯಕ್ರಮವನ್ನು ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಲಾಗಿತ್ತಿದ್ದು, ಈ ಸಂದರ್ಭದಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಲಾಗಿದೆ.

ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಬೆಂಗಳೂರು

ಬೆಂಗಳೂರಿನ ಜಯನಗರದ ಜೆಎಸ್‍ಎಸ್ ವಿದ್ಯಾಸಂಸ್ಥೆಗಳ ಸಮುಚ್ಚಯದಲ್ಲಿ ರಾಜೇಂದ್ರ ಚಿಂತನ ಮಂಟಪವನ್ನು 2005ರಲ್ಲಿ ಪ್ರಾರಂಭಿಸಲಾಯಿತು. ಈ ಕೇಂದ್ರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಸಂಬಂದಿಸಿದ ಕಾರ್ಯಕ್ರಮಗಳು, ಶಾಲೆ-ಕಾಲೇಜುಗಳಿಗೆ ಸಂಬಂಧಿಸಿದ ಹಾಗು ಇತರ 96 ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಸಾಲಿನ ವಾರ್ಷಿಕ ಆವರ್ತ ವೆಚ್ಚ `08.67 ಲಕ್ಷಗಳಾಗಿರುತ್ತದೆ.

ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ

ಇಪ್ಪತ್ತೆರಡನೆಯ ಜಗದ್ಗುರುಗಳಾದ ಮಂತ್ರಮಹರ್ಷಿ ಪರಮ ಪೂಜ್ಯ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳವರು ಸಾಹಿತ್ಯದ ಮೂಲಕ ಸಮಾಜ ಸುಧಾರಣೆ ಮಾಡಲು ಸಾಧ್ಯ ಎಂದು ದೃಢವಾಗಿ ನಂಬಿದ್ದವರು. ಈ ಉದ್ದೇಶದ ಪೂರೈಕೆಗಾಗಿ ಅವರು ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯನ್ನು ಸ್ಥಾಪಿಸಿದರು. ಇದುವರೆಗೆ ಈ ಗ್ರಂಥ ಮಾಲೆಯಲ್ಲಿ 100ಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳನ್ನು ಪ್ರಕಟಿಸಲಾಗಿದೆ. ಈ ಸಾಲಿನಲ್ಲಿ ಪಾಕೇಟ್, ಗೋಡೆ, ಟೇಬಲ್ ಕ್ಯಾಲೆಂಡರ್ ಮತ್ತು ಪಂಚಾಂಗಗಳನ್ನು ಹೊರತರಲಾಗಿದೆ.

ಜೆಎಸ್‍ಎಸ್ ಬುಕ್ ಹೌಸ್: ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯಿಂದ ಪ್ರಕಟಿಸಿದ ಗ್ರಂಥಗಳ ಜೊತೆಗೆ ಇತರ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದ ಉತ್ತಮ ಗ್ರಂಥಗಳನ್ನು ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಜೆಎಸ್‍ಎಸ್ ಬುಕ್ ಹೌಸ್ ಎಂಬ ಮಾರಾಟ ಮಳಿಗೆ ಕಾರ್ಯನಿರ್ವಹಿಸುತ್ತಿದೆ. ಈ ಬುಕ್ ಹೌಸ್ ಮುಖಾಂತರ ಜೆಎಸ್‍ಎಸ್ ಶಾಲೆಗಳಿಗೆ ಕಡಿಮೆ ದರದಲ್ಲಿ ನೋಟ್ ಬುಕ್‍ಗಳನ್ನು ಕೂಡ ಸರಬರಾಜು ಮಾಡಲಾಗುತ್ತಿದೆ.