ಜೆಎಸ್‍ಎಸ್ ಮಹಾವಿದ್ಯಾಪೀಠ

/ಜೆಎಸ್‍ಎಸ್ ಮಹಾವಿದ್ಯಾಪೀಠ
ಜೆಎಸ್‍ಎಸ್ ಮಹಾವಿದ್ಯಾಪೀಠ2016-12-22T13:26:58+00:00

JSS_rsw_29

ಜೆಎಸ್‍ಎಸ್ ಮಹಾವಿದ್ಯಾಪೀಠ

ಪ್ರಗತಿಪರ ಸಮಾಜದ ಹಾದಿಯಲ್ಲಿ

ಮೈಸೂರಿನಲ್ಲಿ ಬಡವಿದ್ಯಾರ್ಥಿಗಳ ಉನ್ನತಕ್ಕಾಗಿ ಶಿಕ್ಷಣ 1928 ರಲ್ಲಿ ಯಾವುದು ಒಂದು ಸಣ್ಣ ವಿದ್ಯಾರ್ಥಿನಿಲಯವಾಗಿ ಪ್ರಾರಂಭವಾಯಿತೋ ಅದು ಇಂದು ಬೃಹತ್ತಾದ ಶೈಕ್ಷಣಿಕ ಚಳವಳಿಯಾಗಿ ಬೆಳೆದುನಿಂತಿದೆ. ಶಿಶುವಿಹಾರಗಳಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣಗಳವರೆಗೆ 310 ಕ್ಕೂ ಹೆಚ್ಚಿನ ಸಂಸ್ಥೆಗಳನ್ನು ತನ್ನ ತೆಕ್ಕೆಯಲ್ಲಿ ಹೊಂದಿರುವ ಜೆಎಸ್‍ಎಸ್ ಮಹಾವಿದ್ಯಾಪೀಠವು ಯಾವುದೇ ಕಾಲದಲ್ಲಾದರೂ 50,000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದೆ.

ಕಾರ್ಯನಿರತ ಗ್ರಾಮೀಣ ಸ್ತ್ರೀಯರ ಹಸುಮಕ್ಕಳಿಗಾಗಿ ಶಿಶುವಿಹಾರಗಳು, ಕನ್ನಡ ಮತ್ತು ಇಂಗ್ಲಿಷ್ ಭಾಷಾ ಮಾಧ್ಯಮಗಳೆರಡರಲ್ಲೂ ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣ ನೀಡುತ್ತಿರುವ ಶಾಲೆಗಳು, ಕಾಲೇಜುಗಳು, ಪಾಲಿಟೆಕ್ನಿಕ್‍ಗಳು, ತಾಂತ್ರಿಕ ಸಂಸ್ಥೆಗಳು, ಗುರುಕುಲಗಳು ಇತ್ಯಾದಿ ಅಗತ್ಯವಾದ ಎಲ್ಲ ಶೈಕ್ಷಣಿಕ ಕ್ಷೇತ್ರಗಳಲ್ಲೂ ಜೆಎಸ್‍ಎಸ್ ಮಹಾವಿದ್ಯಾಪೀಠವು ತನ್ನದೇ ಆದ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ವ್ಯಾಪಕ ಸೌಲಭ್ಯಗಳು ಮತ್ತು ನಿಷ್ಠಾವಂತ ಹಾಗೂ ಶ್ರೇಷ್ಠ ಮಟ್ಟದ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ಈ ಸಂಸ್ಥೆಗಳು ಎಲ್ಲೆಲ್ಲಿ ಸ್ಥಾಪಿತವಾಗಿದೆಯೆಂಬುದನ್ನು ಗಮನಿಸಬೇಕು. ಪ್ರವೇಶಿಸಲು ದುಸ್ಸಾಧ್ಯವಾಗಿರುವಂತಹ ಬುಡಕಟ್ಟು ಜನಾಂಗಗಳ ಹಳ್ಳಿಗಳಿಂದ ಹಿಡಿದು ದೊಡ್ಡ ಪಟ್ಟಣಗಳಾದ ಬೆಂಗಳೂರು, ನೋಯ್ಡ ಮತ್ತು ಊಟಿ ಹಾಗೂ ಅಮೆರಿಕ, ಮಾರಿಷಸ್ ಮತ್ತು ದುಬೈನಲ್ಲಿನ ಹಲವಾರು ಸ್ಥಳಗಳಲ್ಲಿ ಜೆಎಸ್‍ಎಸ್ ಸಂಸ್ಥೆಗಳು ಸ್ಥಾಪನೆಗೊಂಡಿದ್ದು ಸಮಾಜದ ಎಲ್ಲ ವರ್ಗಗಳಿಗೂ ಸೇವೆ ನೀಡಲು ಸಾಧ್ಯವಾಗಿದೆ.

ಸಾಮಾನ್ಯ ಶಿಕ್ಷಣದ ಜೊತೆಗೆ ಗ್ರಾಮೀಣ ಜನರಿಗೆ ತರಬೇತಿ ನೀಡುವ ಸಮಗಗ್ರಾಮೀಣಾಭಿವೃದ್ಧಿ, ಆಧುನಿಕ ಮತ್ತು ಪರಂಪರಾಗತ ಔಷಧಿಗಳ ಮೂಲಕ ಆರೋಗ್ಯ ರಕ್ಷಣೆ, ಸಾಹಿತ್ಯಿಕ ಚಟವಟಿಕೆಗಳು, ದೃಶ್ಯ ಕಲೆಗಳು, ಗ್ರಾಮೀಣ ಕಲೆಗಳು, ದೇವಾಲಯಗಳ ಮತ್ತು ಚಾರಿತ್ರಿಕ ಕಟ್ಟಡಗಳ ಜೀರ್ಣೋ-ದ್ಧಾರಗಳಿಗೆ ಇದರ ವ್ಯಾಪ್ತಿ ಹಿಗ್ಗಿದೆ. ಮಠಾಧೀಶರ ಜಯಂತಿ ಮಹೋತ್ಸವಗಳ ನೆನಪಿಗಾಗಿ ಮಠವು ಸಂಘಟಿಸುವ ಜಾತ್ರೆಗಳಲ್ಲಿ ಮತ್ತು ಸಮಾರಂಭಗಳಲ್ಲಿ ಭಾಗವಹಿಸುವ ಲಕ್ಷೋಪಲಕ್ಷ ಮಂದಿ ಈ ಯೋಜನೆಗಳಿಂದ ಲಾಭ ಪಡೆದಿದ್ದಾರೆ. ಇದು ಯಾವ ರೀತಿ ಯಶಸ್ವಿಯಾಗಿದೆ ಮತ್ತು ಅವರ ಜೀವನದಲ್ಲಿ ಮಾರ್ಪಾಟು ತಂದಿದೆ ಎಂಬುದನ್ನು ಸೂಚಿಸುತ್ತದೆ. ಜೆಎಸ್‍ಎಸ್ ಮಹಾವಿದ್ಯಾಪೀಠವು ನೀಡುತ್ತಿರುವ ಜ್ಞಾನ ದಾಸೋಹವು ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವುದರ ಜೊತೆಗೆ ಸಾಂಪ್ರ್ರದಾಯಿಕ ಮೌಲ್ಯಗಳಿಂದ ಕೂಡಿದ ಪ್ರಗತಿಪರ ಸಮಾಜದ ಹಾದಿಯಲ್ಲಿ ನಡೆಯಲು ನೆರವಾಗುತ್ತಿದೆ.