ಜೆಎಸ್‍ಎಸ್ ಆಸ್ಪತ್ರೆ

/ಜೆಎಸ್‍ಎಸ್ ಆಸ್ಪತ್ರೆ
ಜೆಎಸ್‍ಎಸ್ ಆಸ್ಪತ್ರೆ2016-12-22T14:53:08+00:00

ಜೆಎಸ್‍ಎಸ್ ವೈದ್ಯಕೀಯ ಸೇವಾ ಟ್ರಸ್ಟ್ ಮೈಸೂರಿನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುವ ಸಲುವಾಗಿ ನೂತನ ಕಟ್ಟಡವನ್ನು ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ 12.5 ಎಕರೆ ಜಾಗದಲ್ಲಿ ನಿರ್ಮಿಸಿದೆ. ಈ ಆಸ್ಪತ್ರೆಯು ಭಾರತದಲ್ಲಿ 1800 ಹಾಸಿಗಗಳನ್ನು ಒಂದೇ ಸೂರಿನಡಿ ಹೊಂದಿರುವ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಯ ಮೂಲ ಉದ್ದೇಶ ಮಾನವ ಜೀವನದ ಮೌಲ್ಯವನ್ನು ಎತ್ತಿ ಹಿಡಿದು ಸಮಾಜದ ಎಲ್ಲಾ ವರ್ಗದ ಜನರಿಗೆ ಅತ್ಯಾಧುನಿಕ ಹಾಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ನೀಡುವುದಾಗಿದೆ. ಲಾಭಗಳಿಸುವ ಉದ್ದೇಶವಿಲ್ಲದ ಸೇವೆಗೆ ಮೀಸಲಾದ ಈ ಆಸ್ಪತ್ರೆಯು ಮೈಸೂರು ಹಾಗೂ ಮೈಸೂರಿನ ಸುತ್ತಮುತ್ತಲಿನ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ನೀಡುತ್ತಿದೆ.

ಅತ್ಯುತ್ತಮ ಮೂಲಭೂತ ಸೌಕರ್ಯಗಳು

 • 12.5 ಎಕರೆ ಪ್ರದೇಶ, 12.5 ಲಕ್ಷ ಚ.ಅ. ಕಟ್ಟಡ ಪ್ರದೇಶ
 • 1800 ಹಾಸಿಗೆಗಳನ್ನು ಒಂದೇ ಸೂರಿನಡಿ ಹೊಂದಿರುವ ಭಾರತದ ಕೆಲವೇ ಆಸ್ಪತ್ರೆಗಳಲ್ಲಿ ಒಂದು
 • 40 ಸ್ಪೆಷಾಲಿಟಿಗಳು, ಸೂಪರ್ ಸ್ಪೆಷಾಲಿಟಿ ಹಾಗೂ ಪೂರಕ ಸೇವೆಗಳು
 • 55 ವಿವಿಧ ವಿಶೇಷ ಕ್ಲಿನಿಕ್‍ಗಳು
 • 260 ಹಾಸಿಗೆಗಳನ್ನು ಹೊಂದಿರುವ ಅತೀ ದೊಡ್ಡ ತುರ್ತು ಮತ್ತು ತೀವ್ರ ನಿಗಾ ಸೌಲಭ್ಯ
 • ನುರಿತ ವೈದ್ಯರು ಹಾಗೂ ವೈದ್ಯಕೇತರ ತಂಡ
 • ಮಾನಸಿಕ ಸಮಸ್ಯೆಗಳಿಗೆ ತಜ್ಞರ ತಂಡದಿಂದ ಚಿಕಿತ್ಸೆ; ಸಲಹೆ
 • ಪರಿಸರಸ್ನೇಹಿ ಕಟ್ಟಡ – ಮಳೆನೀರು ಕೊಯಿಲು, ಸೌರ ಶಕ್ತಿ ಸೌಲಭ್ಯ
 • ಕಟ್ಟಡದಲ್ಲಿಯೇ ನೀರು ಶುದ್ಧೀಕರಣ ಘಟಕ

ತಾಂತ್ರಿಕ ಅನುಕೂಲಗಳು

 • ಉತ್ಕೃಷ್ಟ ಮಟ್ಟದ 24 ದೊಡ್ಡ ಆಪರೇಷನ್ ಥಿಯೇಟರ್‍ಗಳು ಹಾಗೂ 3 ಮಾಡ್ಯುಲರ್ ಆಪರೇಷನ್ ಥಿಯೇಟರ್‍ಗಳು
 • 3 ಟೆಸ್ಲಾ MRI ಘಟಕ
 • 128 ಸ್ಲೈಸಸ್ CT ಸ್ಕ್ಯಾನರ್
 • ಹೃದ್ರೋಗಿಗಳಿಗೆ ಫ್ಲಾಟ್ ಪ್ಯಾನೆಲ್ ಕ್ಯಾಥ್ ಲ್ಯಾಬ್
 • ಎಲೆಕ್ಟ್ರೊಫಿಸಿಯಾಲಜಿ ಲ್ಯಾಬ್
 • ಆಧುನಿಕ ರಕ್ತ ಸಂಗ್ರಹಣಾ ಘಟಕ, ಪ್ರಾದೇಶಿಕ ರಕ್ತಪಾತ್ರಾಂತರಣ ಕೇಂದ್ರ
 • ಅತ್ಯುತ್ತಮ ಗುಣಮಟ್ಟದ ಸುಟ್ಟಗಾಯಗಳ ವಾರ್ಡ್
 • ಅತ್ಯುತ್ತಮ ಫಿಸಿಯೋಥೆರಪಿ ಹಾಗೂ ಪುನರ್ವಸತಿ ಸೌಕರ್ಯಗಳು
 • ಸಮಗ್ರ ಆಪ್ತಸಮಾಲೋಚನಾ ಹಾಗೂ ಪರೀಕ್ಷಾ ಕೇಂದ್ರ ಮತ್ತು ಆ್ಯಂಟಿರೆಟ್ರೊ ವೈರಲ್ ಥೆರಪಿ ಕೇಂದ್ರ (ಹೆಚ್‍ಐವಿ ಚಿಕಿತ್ಸೆ), ಐಸಿಟಿಸಿ