JSS_rsw_22

ಜೆಎಎಸ್ ಹಿರಿಯರ ಮನೆ

ವಯೋವೃದ್ಧರ ಬಗ್ಗೆ ಕಾಳಜಿ

ಶಾಂತಿ, ಸಮಾಧಾನಗಳಿಂದ ತಮ್ಮ ಜೀವನದ ಸಂಧ್ಯಾಕಾಲವನ್ನು ಕಳೆಯಲು ಇಚ್ಛಿಸುವ ವೃದ್ಧರಿಗೆ ಜೆಎಸ್‍ಎಸ್ ಹಿರಿಯರ ಮನೆ ಸೂಕ್ತವಾದ ಸ್ಥಳವಾಗಿದೆ. ಸುತ್ತೂರು ಶ್ರೀಕ್ಷೇತ್ರದ ಪ್ರಶಾಂತ ವಾತಾವರಣದ ಹಿನ್ನೆಲೆಯಲ್ಲಿ ಜೆಎಸ್‍ಎಸ್ ಹಿರಿಯರ ಮನೆ ಪ್ರತಿಯೊಬ್ಬ ವೃದ್ಧರಿಗೂ ಅವರ ವಯಸ್ಸಿಗನುಗುಣವಾಗಿ ನೆರವು ನೀಡುತ್ತದೆ. ‘ಹಿರಿಯರ ಮನೆ’ ಎಲ್ಲ ಅಗತ್ಯ ಸೌಲಭ್ಯಗಳಿಂದ ಕೂಡಿದ್ದು ಪ್ರತಿಯೊಬ್ಬ ನಿವಾಸಿಗೂ ಆರಾಮದಾಯಕವಾಗಿದೆ. ಇಲ್ಲಿನ ನಿವಾಸಿಗಳನ್ನು ಪ್ರೀತಿ ಮತ್ತು ಸೌಜನ್ಯತೆÉಯಿಂದ ನೋಡಿಕೊಳ್ಳುವಂತೆ ಸಿಬ್ಬಂದಿ ವರ್ಗಕ್ಕೆ ತರಬೇತಿ ನೀಡಲಾಗಿದೆ.

ಹಿರಿಯರ ಮನೆಯ ವೈಶಿಷ್ಟ್ಯಗಳು

 • ವಾಸ್ತುಬದ್ಧ ಕಟ್ಟಡ ಹಾಗೂ ಅಚ್ಚುಕಟ್ಟಾದ ನಿರ್ಮಾಣ
 • ಉತ್ತಮ ಗಾಳಿ ಮತ್ತು ಬೆಳಕು
 • ಆರೋಗ್ಯ ಕೇಂದ್ರ ತಜ್ಞ ವೈದ್ಯರಿಂದ ಉಚಿತ ಸಲಹೆ/ಔಷಧೋಪಚಾರ
 • ಗ್ರಂಥಾಲಯ
 • ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್ ಸಂಪರ್ಕದಿಂದ ಕೂಡಿದ ಕಂಪ್ಯೂಟರ್ ಕೇಂದ್ರ
 • ಮನರಂಜನಾ ಕೇಂದ್ರ
 • ದೂರವಾಣಿ
 • ದಿನವಿಡೀ ವಿದ್ಯುತ್ ಮತ್ತು ನೀರು
 • ಹಬೆ ಅಡುಗೆಯ ಸೌಲಭ್ಯದಿಂದ ಕೂಡಿದ ಸುಸಜ್ಜಿತ ಅಡುಗೆ ಮನೆ
 • ವಿಶಾಲವಾದ ಊಟದ ಸಭಾಂಗಣ
 • ವಾಹನ ಮತ್ತು ಪಾರ್ಕಿಂಗ್ ಸೌಲಭ್ಯ
 • ಲಾಂಡ್ರಿ ಸೇವೆ
 • ವೈಯಕ್ತಿಕ ಸಹಾಯಕರ ಸೇವೆಗೆ ಸೌಲಭ್ಯ
 • ವೈಯಕ್ತಿಕ ದೂರವಾಣಿ, ಕೇಬಲ್ ಟಿ.ವಿ., ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್‍ನೊಂದಿಗೆ ಕಂಪ್ಯೂಟರ್ ಸೌಲಭ್ಯ