ಜನ್ಮಶತಮಾನೋತ್ಸವ

/ಜನ್ಮಶತಮಾನೋತ್ಸವ
ಜನ್ಮಶತಮಾನೋತ್ಸವ2019-07-01T17:52:29+00:00

2015 ಶ್ರೀಗಳವರ ಜನ್ಮ ಶತಮಾನೋತ್ಸವದ ವರ್ಷವಾಗಿದೆ. ನಾಡಿನ ಶೈಕ್ಷಣಿಕ, ಧಾರ್ಮಿಕ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕøತಿಕ ಚರಿತೆಯನ್ನು ರೂಪಿಸಿದ ಶತಮಾನದ ಸೀಮಾಪುರುಷರ ಜನ್ಮ ಶತಮಾನೋತ್ಸವವನ್ನು ಆಚರಿಸಲು ಇದೀಗ ನಿರ್ಧರಿಸಲಾಗಿದೆ. ಈ ಸಮಾರಂಭವನ್ನು ಒಂದು ವರ್ಷ ಕಾಲ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪೂಜ್ಯರು ಶಿಕ್ಷಣಕ್ಕೆ ನೀಡಿರುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣವನ್ನು ಕುರಿತ ಸಂಸ್ಮರಣ ಗ್ರಂಥ ಹಾಗೂ ಇನ್ನಿತರ ಹೊತ್ತಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಪೂಜ್ಯರನ್ನು ಕುರಿತ ಕವಲ-ಲೇಖನ ಸಂಪುಟ, ಚಿತ್ರಸಂಪುಟ, ಸಾಕ್ಷ್ಯಚಿತ್ರ ಹಾಗೂ ಸಿ.ಡಿಗಳನ್ನು ಹೊರತರಲಾಗುತ್ತಿದೆ. ರಾಜೇಂದ್ರ ವೃತ್ತದಲ್ಲಿ ಅವರ ಪುತ್ಥಳಿಯನ್ನು ಸ್ಥಾಪಿಸುವ ಯೋಜನೆಯಿದೆ.

ಪೂಜ್ಯ ಶ್ರೀಗಳವರ ಜನ್ಮಶತಮಾನೋತ್ಸವದಲ್ಲಿ ವಿದ್ಯಾರ್ಥಿ-ಸಿಬ್ಬಂದಿ ಸಮೂಹ ಹಾಗೂ ಉಪಕೃತ ಜನತೆ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ.

srs_hm1